ಸಹಾಯ ವಾಣಿ

1800 425 7910(Toll free)

ದೃಷ್ಟಿಕೋನ

ತೋಟಗಾರಿಕೆಯಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯ ಹೊಸ ಆಯಾಮಗಳನ್ನು ಸೃಷ್ಟಿಸುವುದು, ತೋಟಗಾರಿಕೆಯ ಸಂಪತ್ತನ್ನು ಆಹಾರ ಮತ್ತು ಪೌಷ್ಠಿಕತೆ ಭದ್ರತೆಯ ಬುನಾದಿಗಾಗಿ ಸನ್ನದ್ದುಗೊಳಿಸಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಶ್ರೇಷ್ಠ ವಿಶ್ವವಿದ್ಯಾಲಯವನ್ನಾಗಿಸುವುದು.

 

ಗುರಿ

ಕರ್ನಾಟಕದಲ್ಲಿ ತೋಟಗಾರಿಕೆ ಕ್ಷೆÃತ್ರದ ಬೆಳವಣಿಗೆಗಾಗಿ ಉನ್ನತ ಗುಣಮಟ್ಟದ ಸೃಜನಾತ್ಮಕ ಶಿಕ್ಷಣವನ್ನು ಒದಗಿಸುವುದು. ತೋಟಗಾರಿಕೆಯಲ್ಲಿ ಸಮರ್ಥನೀಯ ಸಂಶೋಧನೆ ಮತ್ತು ಪರಿಣಾಮಕಾರಿ ವಿಸ್ತರಣಾ ಶಿಕ್ಷಣ ಸೇವೆಯನ್ನು ಒದಗಿಸುವುದು; ನಿರಂತರ ಆವಿಸ್ಕಾರಗಳ ಮೂಲಕ ಅನ್ವಯಿಕ ವಿಜ್ಞಾನಗಳ ಫಲಿತಾಂಶಗಳನ್ನು ಒದಗಿಸುವುದು.

 

ಧ್ಯೇಯೋಧ್ದೇಶಗಳು

 ವಿದ್ಯಾರ್ಥಿಗಳಿಗೆ ತೋಟಗಾರಿಕೆಯ ವಿವಿಧ ವಿಭಾಗಗಳಲ್ಲಿ ಗುಣಮಟ್ಟದ ಬೋಧನೆ ಮಾಡುವ ಮೂಲಕ ಉತ್ತಮ ಶಿಕ್ಷಣ ಒದಗಿಸುವುದು.

 ತೋಟಗಾರಿಕೆಯ ವಿವಿಧ ವಿಭಾಗಗಳಲ್ಲಿ ಅನ್ವಯಿಕ, ಸಂದರ್ಭೋಚಿತ ಆಯಕಟ್ಟಿನ ಮತ್ತು ಮೂಲಭೂತ ಸಂಶೋಧನೆಗಳನ್ನು ಕೈಗೊಳ್ಳುವುದು.

 ಪರಿಣಾಮಕಾರಿ ವಿಸ್ತರಣಾ ಶಿಕ್ಷಣ ವ್ಯವಸ್ಥೆಯ ಮೂಲಕ ರೈತ ಸಮುದಾಯದ ಏಳಿಗೆಗಾಗಿ ತಾಂತ್ರಿಕತೆಗಳ ವರ್ಗಾವಣೆ ಮಾಡುವುದು.

 ರಾಜ್ಯ ಸರ್ಕಾರದಿಂದ ಸೂಚಿಸಲ್ಪಡುವ ಹಾಗೂ ಅವಶ್ಯಕತೆಗಳ ಅನುಸಾರವಾಗಿ ಇತರೆ ಚಟುವಟಿಕೆಗಳನ್ನು ಕೈಗೊಳ್ಳುವುದು

© 2019 ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ . ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ